Sunday, January 9, 2011

ರೊಮ್ಯಾನ್ಸ್ ಕುರಿತ ಒಂದು ಚರ್ಚೆ

ಕಳೆದ ಪೋಸ್ಟಿನಲ್ಲಿ ಪ್ರಕಟಿಸಿದ ಪಾಡ್ ಕಾಸ್ಟಿನಲ್ಲಿ ನಡೆದ ಮಾತುಕತೆಯ ಕುರಿತು ಬಜ್‌ನಲ್ಲಿ ನಡೆದ ಚರ್ಚೆಯಿದು:

ranjith adiga - Yako avara anisike oppitavagalilla.. supreeth roo tamma endina chintana dhaatiyanu jebolagittu aalisadaru annisitu.

supreeth ks - @ranjit: ಯಾವ ಅನಿಸಿಕೆ ಏಕೆ ಒಪ್ಪಿತವಾಗಲಿಲ್ಲ ಎಂಬುದನ್ನು ಬ್ಲಾಗಿನಲ್ಲಿ ಕಮೆಂಟಿಸಿದರೆ ಚೆನ್ನ. ಇದು ಡಿಬೇಟ್ ಅಲ್ಲ, ಮಾತುಕತೆ. ಶೇಖರ್ ಪೂರ್ಣರನ್ನು ಆಲಿಸುವುದಕ್ಕೆಂದೇ ನಾವು ಅವರನ್ನು ಭೇಟಿ ಮಾಡುವುದು. ನಮ್ಮ ಅಭಿಪ್ರಾಯ ಹೇಳುವ ಮುನ್ನ ಮಾತನಾಡುವವರ ಅಭಿಪ್ರಾಯವನ್ನು ಶಾಂತಿಯಿಂದ ಕೇಳುವ ತಾಳ್ಮೆಯು ಬೇಕಲ್ಲವೇ?

hema powar - @ Supreet ಹಾಗಾದರೆ ಇದು ಒನ್ ಸೈಡ್ ಆರ್ಗ್ಯುಮೆಂಟ್ ಆಯಿತು, ನನಗೆ ತಿಳಿದ ಹಾಗೆ ಚರ್ಚೆ, ಮಾತುಕತೆ ಎಂದು ಮೊದಲೇ ಡಿಸೈಡ್ ಮಾಡಿ ಮಾತಾಡಲು ಬರದು, ಮಾತನಾಡತೊಡಗಿದರೆ ಎಲ್ಲವೂ ಅದಾಗೇ ಶುರುವಾಗುತ್ತದೆ. ನೀವು ಈ ಮಾತುಕತೆಯನ್ನು podcost ಮಾಡಲೆಂದೇ record ಮಾಡಿದ್ದ? ಇಲ್ಲವೆಂದಾದರೆ ನೀವು ಸುಮ್ಮನಿರುವುದನ್ನು ಜಸ್ಟಿಫಐ ಮಾಡಿಕೊಳ್ಳಲಾರಿರಿ :-)

supreeth ks - @hema ಚರ್ಚೆಗೆ ಮೊದಲೇ ವಿಷಯವನ್ನು ನಿಷ್ಕರ್ಷಿಸಿಕೊಂಡರೆ ಆಗ ಎರಡೂ ಬದಿಯ ವಾದಗಳ ಅವಶ್ಯಕತೆ ಇರುತ್ತದೆ. ಪಾಡ್ ಕಾಸ್ಟ್ ಮಾಡಲಿಕ್ಕೆಂದೆ ನಾವು ಮಾತಿಗೆ ಕೂತದ್ದಲ್ಲ. ಸಹಜವಾದ ಮಾತುಕತೆಯನ್ನು ರೆಕಾರ್ಡ್ ಮಾಡಿಟ್ಟುಕೊಂಡು ಪಾಡ್ ಕಾಸ್ಟ್ ಮಾಡಿದ್ದು.
ಎಲ್ಲರೂ ಮಾತಾಡುವುದೇ ಒಳ್ಳೆಯ ಚರ್ಚೆಯಲ್ಲ! ಎಲ್ಲಕ್ಕಿಂತ ಹೆಚ್ಚಾಗಿ, ಡಿಸೈಪಲ್ ಆದವನು ಮೊದಲು ಕೇಳುವುದನ್ನು ಕಲಿಯಬೇಕು ಎಂದು ನಂಬಿದವನು ನಾನು.

hema powar - ಉಹೂಂ ಎಲ್ಲರೂ ಮಾತಾಡುವುದೇ ಒಳ್ಳೆಯ ಚರ್ಚೆ ಎಂದು ನಾನೂ ಒಪ್ಪುವುದಿಲ್ಲ. ಸಹಜವಾದ ಮಾತುಕತೆಯಾದರೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಕೇಳುವ ಅವಶ್ಯಕತೆ ಏನಿತ್ತು? ಎನ್ನುವುದಷ್ಟೇ ಪ್ರಶ್ನೆ. ನಿಮ್ಮ ಅಭಿಪ್ರಾಯಗಳು ಕೂಡ ಪ್ರಸ್ತುತ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿಸಲು ಸಹಕರಿಸುತ್ತಿತ್ತಲ್ಲವೇ?

supreeth ks - @ hema: ಮಾತುಕತೆಯಲ್ಲಿ ಮಾತಾಡುವ ವಿಷಯದ ಬಗ್ಗೆ ಏನೂ ತಿಳಿಯದೆ ಬಾಯಿ ಬಿಟ್ಟರೆ ಒಣ ಮಾತುಗಳು ಹೊರಬರುತ್ತವೆಯಷ್ಟೇ. ತಿಳಿದವರು ಮಾತಾಡುವಾಗ ಬಾಯಿ ಮುಚ್ಚಿರಬೇಕು, ಕಿವಿ ತೆರೆದಿರಬೇಕು ಅಲ್ಲವೇ? ನಿಮಗೆ ಯಾವ ವಿಷಯದ ಕುರಿತು ಹೆಚ್ಚಿನ ಸ್ಪಷ್ಟತೆ ಬೇಕು ಎನ್ನುವ ಬಗ್ಗೆ ಬ್ಲಾಗಿನಲ್ಲಿ ಕಮೆಂಟಿಸಿ ಪ್ರಶ್ನಿಸಬಹುದು.

ranjith adiga - ಪಾಡುಕಾಸ್ಟು ಕೇಳುತ್ತಿದ್ದ ನಿಮ್ಮ ಅಭಿಮಾನಿಗಳಾದ ನಮ್ಮಂಥವರಿಗೆ, ಅವರು ಅಂದಿದ್ದಕ್ಕೆ ನಿಮ್ಮದೂ ಒಪ್ಪಿಗೆಯಿತ್ತು ಅನ್ನುವ ಭಾವ ಉಂಟಾಗುತ್ತಿತ್ತು..

supreeth ks - @ranjith: ನಿಮಗೆ ಯಾವ ವಿಷಯಗಳ ಕುರಿತು ಒಪ್ಪಿಗೆಯಿಲ್ಲ ಎನ್ನುವುದನ್ನು ತಿಳಿಸಲೇ ಇಲ್ಲ

Roopa lakshmi - podcast nalli enayitho gottilla, illi olle charche nadeyuttide :-)

supreeth ks - >>> podcast nalli enayitho gottilla
yaake, kelalillave podcast?

ranjith adiga - ista aagadiddudu, indian films nalli romanticism ilve illa anno abhiprayada kuritu.

supreeth ks - @ ranjit: ನಿಮ್ಮ ಇಷ್ಟದ ಕುರಿತು ಏನೂ ಚರ್ಚೆ ನಡೆಸಲಾಗದು. ಅವರ ವಿಚಾರದ ಕುರಿತು ಆಕ್ಷೇಪ ಇದ್ದರೆ ಚರ್ಚೆ ನಡೆಸಬಹುದು.
ಸಿನೆಮಾ ಇರಲಿ, ಯಾವುದೇ ಕಲಾ ಪ್ರಕಾರದಲ್ಲಿಯೂ ರೊಮ್ಯಾನ್ಸ್ ಸ್ವತಂತ್ರವಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ. ನೋಡಿ ನೀವು ಅತ್ಯುತ್ತಮ ರೊಮ್ಯಾನ್ಸ್ ಸಿನೆಮಾಗಳ ಅಥವಾ ಸಾಹಿತ್ಯದ ಪಟ್ಟಿ ಮಾಡಿ ಕೊಡಿ ಅದರಲ್ಲಿ ರೊಮ್ಯಾನ್ಸ್ ಎನ್ನುವುದು ಜಾತಿ ತಾರತಮ್ಯ, ವರ್ಗ ಸಂಘರ್ಷ, ಬಡತನ ಶ್ರೀಮಂತಿಕೆ, ಕೌಟುಂಬಿಕ ಕಲಹ ಇಂಥ ಎಲಿಮೆಂಟ್ಸ್ ನಿಂದಲೇ ಪರಿಣಾಮಕಾರಿಯಾಗುವುದು. ಇದಿಲ್ಲದ ರೊಮ್ಯಾನ್ಸ್ ಇದ್ದರೆ ತಿಳಿಸಿ.

ranjith adiga - ನನ್ನ ಇಷ್ಟ ಮತ್ತು ನನ್ನ ವಿಚಾರಧಾರೆ ಎರಡೂ ಬೇರೆ ಬೇರೆ ಸಂಗತಿ ಅಲ್ಲ.. ಅಲ್ಲದೇ ರೋಮಾನ್ಸ್ ಸ್ವತಂತ್ರವಾಗಿರುವ ಚಿತ್ರಗಳು ಇಲ್ಲವೇ ಇಲ್ಲವೆಂದಲ್ಲ.. ಹಂ ಆಪ್ ಕೆ ಹೈ ಕೌನ್ ನಂತಹ ಚಿತ್ರಗಳೂ ಇವೆ.. (ಅದಕ್ಕೂ ಯಾವುದಾದರೂ ಎಲಿಮೆಂಟ್ಸ್ ಹುಡುಕಿ ಜೋಡಿಸಬಹುದು ಅನ್ನುವುದರ ಅರಿವಿದೆ) ಚಿತ್ರದ ಹೆಸರು ಕೊಡಿ ಅದರಲ್ಲಿನ ಎಲಿಮೆಂಟ್ಸನ್ನು ಭೇದಿಸಿ ತಿಳಿಸುತ್ತೇನೆ ಎಂದು ಹಟ ಹಿಡಿದರೆ, ಯಾವ ಎಲಿಮೆಂಟ್ಸೂ ಇರದ ರೋಮಾನ್ಸ್ ಚಿತ್ರ ಹುಡುಕುವುದು ಎಂಬುವುದು ಹೋಟೇಲ್ ನಲ್ಲಿ ’ಎಣ್ಣೆ ಹಾಕದ ಪೂರಿ ಕೊಡಿ’ ಎಂಬ ರಿಕ್ವೆಸ್ಟ್ ನ ಹಾಗೆಯೇ ಆಗುತ್ತದೆ.. ಮತ್ತು ಆ ರೀತಿಯಾಗೇ ವಿಚಾರ ಮಾಡಹೊರಟರೆ "ಡ್ರಾಮಾ ಸ್ವತಂತ್ರವಾಗಿರುವ ಸಿನೆಮಾಗಳಿರಲು ಸಾಧ್ಯವೇ ಇಲ್ಲ" "ಫೈಟಿಂಗ್ ಸ್ವತಂತ್ರವಾಗಿರುವ ಸಿನೆಮಾಗಳಿರುವ ಸಾಧ್ಯತೆಯೇ ಇಲ್ಲ" ಹೀಗೆ ಸ್ಟೇಟ್ ಮೆಂಟ್ ಗಳ ಲಿಸ್ಟು ಕೊಡುತ್ತಾ ಹೋಗಬಹುದು..

supreeth ks - ಹೌದು ಶೇಖರ್ ಸರ್ ಹೇಳಿದ ಪಾಯಿಂಟ್ ಅದೇ. ನಾವು ನೀವು ಮಧ್ಯಮ ವರ್ಗದ ಹಿಪಾಕ್ರಸಿಯ ಭಾಗವಾಗಿ ಬಳಸುವ ಪ್ರೀತಿ, ಭಾವುಕತೆ, ಪ್ರೇಮ, ನಿಷ್ಕಲ್ಮಶ ಭಾವನೆ ಮೊದಲಾದವು ಕಲೆಯಾಗುವಲ್ಲಿ ಸ್ವತಂತ್ರವಾಗಿ ನಿಲ್ಲಲಾರವು. ಅದನ್ನು ಸಪೋರ್ಟ್ ಮಾಡುವುದಕ್ಕೆ ಯಾವಾಗಲೂ ವಿರುದ್ಧ ಅಂಶಗಳು ಬೇಕೇಬೇಕಾಗುತ್ತವೆ.
ಅಲ್ಲದೆ ಶೇಕರ್ ಪೂರ್ಣ ಹೇಳಿದ್ದು ಭಾರತೀಯ ಸಿನೆಮಾಗಳ ಮೇಲೆ ಅವು ತೀರಾ ಸೆಕ್ಷುಯಲ್ ಹಾಗೂ ರೊಮ್ಯಾಂಟಿಕ್ ಎನ್ನುವ ಆರೋಪಕ್ಕೆ ತಮ್ಮ ವಿರೋಧವಿದೆಯೆಂದು.
ನಿಮ್ಮ ಇಷ್ಟ ಹಾಗೂ ವಸ್ತುನಿಷ್ಠ ವಿಮರ್ಶೆ ಬೇರೆ ಬೇರೆ. ನಿಮಗೆ ನಿಮ್ಮ ತಾಯಿ ನಾಡು ಅಂದರೆ ಪ್ರೀತಿ, ಆದರೆ ಇದರಲ್ಲಿನ ಕುಂದು ಕೊರತೆಯನ್ನು ನೀವು ಇಷ್ಟದಿಂದ ದೂರ ನಿಂತು ನಿರ್ಲಿಪ್ತಿಯಲ್ಲೇ ನೋಡಬೇಕು.

1 comment:

  1. @suprith: ಸುಪ್ರೀತ್ ಈ ಪಾಡ್ಕಾಸ್ಟ್ನಲ್ಲಿ ಶೇಖರ್ ಪೂರ್ಣ ಹೇಳಿದಂತೆ "ನಾವು ನೀವು ಮಧ್ಯಮ ವರ್ಗದ ಹಿಪಾಕ್ರಸಿಯ ಭಾಗವಾಗಿ ಬಳಸುವ ಪ್ರೀತಿ, ಭಾವುಕತೆ, ಪ್ರೇಮ, ನಿಷ್ಕಲ್ಮಶ ಭಾವನೆ ಮೊದಲಾದವು ಕಲೆಯಾಗುವಲ್ಲಿ ಸ್ವತಂತ್ರವಾಗಿ ನಿಲ್ಲಲಾರವು."
    ಇದು ಅವರ ಅನಿಸಿಕೆ...
    ಆದರೆ ಸ್ವತಂತ್ರವಾಗಿ ರೊಮ್ಯಂಟಿಕ್ ಎಂದರೆ ಏನು? ಇದರ ಬಗ್ಗೆ ಯಾವುದೇ ಮಾತು’ಕಥೆ’ ಈ ಪಾಡ್ ಕಾಸ್ಟ್ನಲ್ಲಿ ಇಲ್ಲ.. ಯಾವುದೇ ಒಂದು ಇಸಂ ಅಥವ ಅದರೊಳಗಿನ ಅಥವ ಅದರ ಹೊರಗುಳಿಯುವ ಭಾವದ ಕುರಿತಾಗಿ ಚರ್ಚಿಸುವಾಗ ಅಥವ ಅದರ ಕುರಿತಾಗಿ statement ಕೊಡುವಾಗ ’ಅವರ’ ದೃಷ್ಠಿಕೋನದಲ್ಲಿ ಆ ರೊಮ್ಯಾಂಟಿಕ್ ಎಂದರೆ ಏನು ? ಹೇಗಿರಬೇಕು? ಎಂಬುದು ತಿಳಿಸಿದಾಗ ಮಾತ್ರ ಈ ’ದೃಶ್ಯ’ಕಲೆಯಲ್ಲಿ ಅವರ visual politics ಅರ್ಥ ಪಡೆದುಕೊಳ್ಳಬಹುದೇನೋ...
    ಇಲ್ಲವಾದಲ್ಲಿ ಈ ಮಾತು’ಕಥೆ’ ಬರೀ "(.........)" ಮಾತ್ರ ಉಳಿಯುತ್ತದೆ.
    http://www.google.co.in/images?q=romanticism&hl=en&prmd=ivnsb&source=lnms&tbs=isch:1&ei=kA8qTcnmIo_svQP4x8zgBA&sa=X&oi=mode_link&ct=mode&ved=0CBEQ_AU&biw=1024&bih=677
    18ನೇ ಶತಮಾನದ ಕಾಲಘಟ್ಟದಲ್ಲಿ ದೃಶ್ಯ, ಸಾಹಿತ್ಯ, ಕವನಗಳ ಮೂಲಕ ಒಂದು ಪ್ರಮುಖ ಪಂಥವಾಗಿದ್ದ ಈ ರೊಮ್ಯಾಂಟಿಸಂ ನ ಚಿತ್ರಗಳನ್ನು ಇಲ್ಲಿ ಕಾಣಬಹುದು.

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ