Thursday, April 21, 2011

ಕಿರುಚಿತ್ರ ‘ಸುಳಿ’ ಚಿತ್ರೀಕರಣದಲ್ಲಿ...

ಸಂವಾದ ಡಾಟ್ ಕಾಂ ಆಶ್ರಯದಲ್ಲಿ ಪೂರ್ಣ ಪ್ರಮಾಣದ ಸಿನೆಮ ಒಂದನ್ನು ನಿರ್ಮಿಸಲು ನಾವು ತೊಡಗಿಕೊಂಡು ತುಂಬಾ ದಿನಗಳು ಕಳೆದವು. ಚಿತ್ರಕತೆಯ ಚರ್ಚೆಯಲ್ಲಿ ಹೆಚ್ಚಿನ ಸಮಯ ಕಳೆದ ನಮಗೆ ಪೂರ್ಣ ಪ್ರಮಾಣದ ಚಿತ್ರ ನಿರ್ಮಾಣದ ಸವಾಲುಗಳು ಒಂದೊಂದಾಗಿ ಎದುರಾದವು. ದೊಡ್ಡ ಪ್ರಯತ್ನಕ್ಕೆ ಮುನ್ನ ಕೆಲವು ಸಣ್ಣ ಯೋಜನೆಗಳನ್ನು ಪೂರೈಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡರೆ ಒಳ್ಳೆಯದು ಎಂದು ನಮಗೆ ಕಂಡಿತು. ಅದಕ್ಕಾಗಿ ನಾಲ್ಕು ಕಿರು ಚಿತ್ರದ ಚಿತ್ರಕತೆಯನ್ನು ತಯಾರು ಮಾಡಿಟ್ಟುಕೊಂಡೆವು.


ಭೂತಗನ್ನಡಿ ಬ್ಲಾಗಿನ ಸದಸ್ಯರಾದ ಸುಪ್ರೀತ್.ಕೆ.ಎಸ್, ರೂಪ ಲಕ್ಷ್ಮಿ, ಕಿರಣ್.ಎಂ, ಮುಕುಂದ್ ಚಿತ್ರಕತೆಗಳನ್ನು ಬರೆದಿದ್ದಾರೆ. ಈ ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇರುವವರಿಗೆಂದು ಕಳೆದ ಭಾನುವಾರ ಒಂದು ಆಡಿಷನ್ ಹಮ್ಮಿಕೊಂಡಿದ್ದೆವು. ಸುಮಾರು ಐವತ್ತಕ್ಕು ಹೆಚ್ಚು ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದರು. ನಟನೆಯಷ್ಟೇ ಅಲ್ಲದೆ ತೆರೆಯ ಹಿಂದಿನ ಕೆಲಸಗಳಲ್ಲಿ ಕೈಜೋಡಿಸಲು ಅನೇಕರು ಮುಂದೆ ಬಂದಿದ್ದಾರೆ. ಇವರೆಲ್ಲರ ಆಸಕ್ತಿ ಹಾಗೂ ಬೆಂಬಲ ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿದೆ.

ಕಿರುಚಿತ್ರಗಳ ಚಿತ್ರೀಕರಣ ಮುಂದಿನ ದಿನಗಳಲ್ಲಿ ನಡೆಯಲಿದೆ. ಯೋಜನೆಯ ಮೊದಲ ಭಾಗವಾಗಿ ಸುಪ್ರೀತ್ ಬರೆದಿರುವ ಚಿತ್ರಕತೆಯ ಚಿತ್ರೀಕರಣ ಕೈಗೆತ್ತಿಕೊಳ್ಳಲಾಗಿದೆ. ನಟವರ್ಗವನ್ನು ತೀರ್ಮಾನಿಸಲಾಗಿದ್ದು ಈ ವಾರಾಂತ್ಯದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.


ಚಿತ್ರದ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಬ್ಲಾಗಿನಲ್ಲಿ ಹಾಗೂ ಟ್ವಿಟರ್ ಪೇಜಿನಲ್ಲಿ ಹಂಚಿಕೊಳ್ಳಲಾಗುವುದು. ಎಂದಿನಂತೆ ನಿಮ್ಮ ಸಹಕಾರ ಹಾಗೂ ಬೆಂಬಲದ ನಿರೀಕ್ಷೆಯಲ್ಲಿ


ಕಿರುಚಿತ್ರದ ಶೀರ್ಷಿಕೆ: ಸುಳಿ


ಚಿತ್ರದ ಅವಧಿ: -೨೦ ನಿಮಿಷ

ಕಿರುಚಿತ್ರದ ನಟವರ್ಗ ಇಂತಿದೆ:


ಪಾತ್ರ: ಅನೀಶ್, ಸಾಫ್ಟ್ ವೇರ್ ಇಂಜಿನಿಯರ್

ನಟ: ಶಶಿಭಟ್












ಪಾತ್ರ: ಉಮೇಶ್, ಟಿವಿ ಜರ್ನಲಿಸ್ಟ್

ನಟ: ಅನಿರುದ್ಧ











ಪಾತ್ರ: ವೀಣ, ಅನೀಶ್ ಮದುವೆಯಾಗಲಿರುವ ಹುಡುಗಿ

ನಟಿ: ಕಾಂತಿ.ಎಂ.ಜಿ









ಪಾತ್ರ: ಅನೀಶ್ ಆಫೀಸಿನ ಮ್ಯಾನೇಜರ್

ನಟ: ಶಿವಕುಮಾರ್ ಶೆಟ್ಟರ್








ಪಾತ್ರ: ಉಮೇಶ್ ಗೆಳೆಯ

ನಟ:ವೆಂಕಿ ಹೊನ್ನಾವರ್












ಪಾತ್ರ: ಶಿರಿನ್, ಅನೀಶ್ ಗೆಳತಿ

ನಟಿ (ಧ್ವನಿಯಲ್ಲಿ ): ಹೇಮ ಪವಾರ್










ಪಾತ್ರ: ಅನೀಶ್ ತಾಯಿ

ನಟಿ (ಧ್ವನಿಯಲ್ಲಿ): ಸೀತಾ ಚಂದ್ರಶೇಖರ್











ನಟನೇತರರ ತಂಡ:


ಕತೆ, ಚಿತ್ರಕತೆ, ನಿರ್ದೇಶನ: ಸುಪ್ರೀತ್.ಕೆ.ಎಸ್



ಸಹನಿರ್ದೇಶನ: ಶಿವಕುಮಾರ್.ಪಿ


ನಿರ್ಮಾಣ ನಿರ್ವಹಣೆ: ಹೇಮ ಪವಾರ್

8 comments:

  1. :) All the very best . . Let us now . . after the complition of the shooting. where u gona release it??

    ReplyDelete
  2. Thank you sir.
    We don't have particular plans of releasing it. As it is a short movie we cannot obviously screen it in theaters... Lets see...

    ReplyDelete
  3. ನನಗೂ ಕುತೂಹಲವಿದೆ. ಸಂವಾದದ ರವಿ ಸರ್ ಜೊತೆ ಮಾತಾಡಿದೆ. ಮುಂದಿನ ವಾರ ನಿಮ್ಮೊಂದಿಗೆ ಸೇರಿ ನಾನು ಹೊಸದನ್ನು ಕಲಿಯುವ ಆಸೆಯಾಗಿದೆ. ನಾನು ಸಧ್ಯ ತೆರೆಯ ಹಿಂಭಾಗದ ಕೆಲಸವನ್ನು ಕಲಿಯಲು ಬರುತ್ತಿದ್ದೇನೆ..

    ReplyDelete
  4. Congrats Shashi...All the very best

    ReplyDelete
  5. Looks to be good potential team formed . Hope to see good kannada movies back again . I wish good luck to your short movie

    ReplyDelete
  6. @ shivu sir,
    ನಮ್ಮಿಂದ ಕಲಿಯಲಿಕ್ಕಿದೆ ಎನ್ನುವುದು ದೊಡ್ಡ ಮಾತು. ಇದು ನಿಮ್ಮ ವಿನಯವನ್ನು ಸೂಚಿಸುತ್ತದೆ. ನಿಮ್ಮಷ್ಟು ಕೆಮರಾದೊಂದಿಗೆ ನುರಿತ ತಂತ್ರಜ್ಞರು ನಮ್ಮೊಂದಿಗಿದ್ದರೆ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
    ಚಿತ್ರೀಕರಣದ ವಿವರಗಳನ್ನು ನಿಮಗೆ ತಿಳಿಸುತ್ತೇನೆ ಅವಶ್ಯವಾಗಿ ಬನ್ನಿ.

    ReplyDelete
  7. @ Renuka
    It is our humble effort to create fresh debate about cinema making. We don't have any higher expectation than that.

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ