Saturday, April 23, 2011

ಮೊದಲ ದಿನದ ಚಿತ್ರೀಕರಣ


ಮೊದಲ ಚುಂಬನ ದಂತ ಭಗ್ನ! ಮೊದಲ ದಿನದ ಚಿತ್ರೀಕರಣ ಇದಕ್ಕಿಂತ ಹೊರತಾದ ಅನುಭವವೇನಾಗಿರಲಿಲ್ಲ. ಬೆಳಗಿನಿಂದಲೂ ಮೋಡದ ಮರೆಯಲ್ಲಿ ಅವಿತಿದ್ದ ಸೂರ್ಯ. ಹತ್ತು ಗಂಟೆಗೆ ಶುರುವಾಗಬೇಕಾಗಿದ್ದ ಚಿತ್ರೀಕರಣ ಶುರುವಾದದ್ದು ಒಂದು ಗಂಟೆಗೆ. ಮೂರು ಸೀನ್‌ಗಳು ಪೂರೈಸಬೇಕಿದ್ದ ಶೆಡ್ಯೂಲ್ ಗಾಳಿಗೆ ತೂರಲ್ಪಟ್ಟಿತು. ಚಿತ್ರೀಕರಣದ ಪ್ರಾಯೋಗಿಕ ಕಷ್ಟಗಳು, ಕಿರಿಕಿರಿಗಳು ಎಲ್ಲವನ್ನೂ ಇಂಚಿಂಚಾಗಿ ಅನುಭವಿಸುತ್ತ ಚಿತ್ರೀಕರಣ ನೆಡೆಸಲಾಯ್ತು. ಫ್ಲಾಶ್ ಬಲ್ಬ್ ಸುಟ್ಟು ಹೋಗುವವರೆಗೂ ನಮ್ಮ ಉತ್ಸಾಹವೂ ಸಾವಿರ ವ್ಯಾಟ್ ಗಳಷ್ಟು ಇತ್ತು.ಮಳೆಯ ಆರ್ಭಟವನ್ನು ಶಪಿಸುತ್ತ ನಾಳಿನ ಚಿತ್ರೀಕರಣಕ್ಕೆ ತಯಾರಿ ಶುರುವಾಗ್ತಿದೆ.

ಇಂದಿನ ಸಾಹಸದ ಕೆಲವು ಫೊಟೊಗಳು:







4 comments:

  1. ಮೊದಲ ದಿನದಾನುಭವದ ದಾಖಲೆಯ ಛಾಯಾ ಚಿತ್ರಗಳು ಚೆನ್ನಿವೆ.

    ReplyDelete
  2. ಧನ್ಯವಾದ ಮಂಜು. ನಿಮ್ಮನ್ನು ಮಿಸ್ ಮಾಡ್ತಿದ್ವಿ ಲೊಕೇಶನ್ ನಲ್ಲಿ...

    ReplyDelete
  3. ಸಧ್ಯಕ್ಕೆ ನಾನೀಗ ಹುಬ್ಬಳ್ಳಿ ಹತ್ತಿರದ ಒಂದು ಹಳ್ಳಿಯಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೀನಿ.

    ReplyDelete
  4. ಓ, ನಿಮ್ಮ ಚಿತ್ರೀಕರಣ ಯಶಸ್ವಿಯಾಗಿ ನಡೆಯಲಿ. ಆಲ್ ದಿ ಬೆಸ್ಟ್.

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ