ಮೊದಲ ಚುಂಬನ ದಂತ ಭಗ್ನ! ಮೊದಲ ದಿನದ ಚಿತ್ರೀಕರಣ ಇದಕ್ಕಿಂತ ಹೊರತಾದ ಅನುಭವವೇನಾಗಿರಲಿಲ್ಲ. ಬೆಳಗಿನಿಂದಲೂ ಮೋಡದ ಮರೆಯಲ್ಲಿ ಅವಿತಿದ್ದ ಸೂರ್ಯ. ಹತ್ತು ಗಂಟೆಗೆ ಶುರುವಾಗಬೇಕಾಗಿದ್ದ ಚಿತ್ರೀಕರಣ ಶುರುವಾದದ್ದು ಒಂದು ಗಂಟೆಗೆ. ಮೂರು ಸೀನ್‌ಗಳು ಪೂರೈಸಬೇಕಿದ್ದ ಶೆಡ್ಯೂಲ್ ಗಾಳಿಗೆ ತೂರಲ್ಪಟ್ಟಿತು. ಚಿತ್ರೀಕರಣದ ಪ್ರಾಯೋಗಿಕ ಕಷ್ಟಗಳು, ಕಿರಿಕಿರಿಗಳು ಎಲ್ಲವನ್ನೂ ಇಂಚಿಂಚಾಗಿ ಅನುಭವಿಸುತ್ತ ಚಿತ್ರೀಕರಣ ನೆಡೆಸಲಾಯ್ತು. ಫ್ಲಾಶ್ ಬಲ್ಬ್ ಸುಟ್ಟು ಹೋಗುವವರೆಗೂ ನಮ್ಮ ಉತ್ಸಾಹವೂ ಸಾವಿರ ವ್ಯಾಟ್ ಗಳಷ್ಟು ಇತ್ತು.ಮಳೆಯ ಆರ್ಭಟವನ್ನು ಶಪಿಸುತ್ತ ನಾಳಿನ ಚಿತ್ರೀಕರಣಕ್ಕೆ ತಯಾರಿ ಶುರುವಾಗ್ತಿದೆ.
ಇಂದಿನ ಸಾಹಸದ ಕೆಲವು ಫೊಟೊಗಳು: